ಕೂಡಲ ಸಂಗಮ ಅಭಿವೃದ್ಧಿ ಮಂಡಳಿ

    ಕಂದಾಯ ಇಲಾಖೆ, ಕರ್ನಾಟಕ ಸರಕಾರ

    ಶರಣರ ಬರುವೆಮಗೆ ಪ್ರಾಣ ಜೀವಾಳವಯ್ಯ

Facilities

ಸೌಲಭ್ಯಗಳು

ಕೂಡಲ ಸಂಗಮ ಅಭಿವೃದ್ಧಿ ಮಂಡಳಿ


ಕೂಡಲಸಂಗಮದಲ್ಲಿ ವಸತಿ ಸಲುವಾಗಿ ಈ ಕೆಳಗಿನ ವ್ಯವಸ್ಥೆ ಮಾಡಲಾಗಿದೆ

 

1) ಯಾತ್ರಿ ನಿವಾಸ:


   ಕೂಡಲಸಂಗಮ ಕ್ಷೇತ್ರ ದಶದಿಕ್ಕುಗಳಿಂದ ಯಾತ್ರಾರ್ಥಿಗಳನ್ನು ಆಕರ್ಷಿಸುತ್ತದೆ. ಚಾಲುಕ್ಯರ ಆಡುಂಬೊಲವಾದ ಈ ನಾಡು ವಾಸ್ತು ಶಿಲ್ಪಕ್ಕೆ ಖ್ಯಾತಿ ಪಡೆದಿದೆ. ಇತ್ತೀಚೆಗೆ ಆಲಮಟ್ಟಿ ಹಾಗೂ ಕೂಡಲಸಂಗಮ ರಾಷ್ಟ್ರೀಯ ಹೆದ್ದಾರಿ 13 ರಲ್ಲಿ ಪ್ರವಾಸಿಗರ ಆಕರ್ಷಣೆಯ ಕೇಂದ್ರಗಳಾಗಿ ರೂಪಗೊಂಡಿವೆ. ಇಲ್ಲಿಗೆ ಬರುವ ಅಸಂಖ್ಯಾತ ಯಾತ್ರಾರ್ಥಿಗಳ ವಸತಿ ಸೌಲಭ್ಯಕ್ಕಾಗಿ ಯಾತ್ರ ನಿವಾಸ ಸಿದ್ದವಾಗಿದೆ. ಇಲ್ಲಿ ಎಲ್ಲ ವರ್ಗಗಳ ಜನತೆಗೆ ಸಮಾನ ಅವಕಾಶ ಕಲ್ಪಿಸುವ ರೀತಿಯಲ್ಲಿ ವಸತಿ ಸೌಲಭ್ಯವನ್ನು ಒದಗಿಸುವಂತೆ ಕಟ್ಟಡ ನಿರ್ಮಾಣಗೊಂಡಿದೆ.


   ಒಟ್ಟು ಕಟ್ಟಡ 41500 ಚದುರ ಅಡಿ ವಿಸ್ತೀರ್ಣ ಹೊಂದಿದೆ. ಈ ವಸತಿ ಗೃಹವನ್ನು ಗುತ್ತಿಗೆಯ ಆಧಾರದ ಮೇಲೆ ನಿರ್ವಹಿಸಲು ಮೆ|| ಜೈನ್ ದರ್ಶನ, ಇಳಕಲ್ ಇವರಿಗೆ ಕೊಡಲಾಗಿದೆ. ಒಟ್ಟು 500 ಜನ ತಂಗುವ ವ್ಯವಸ್ಥೆ ಈ ಕಟ್ಟಡದಲ್ಲಿದೆ. ಇಡೀ ಕಟ್ಟಡಕ್ಕೆ ಸೂರ್ಯ ಶಾಖದಿಂದ ಬಿಸಿ ನೀರನ್ನು ಒದಗಿಸುವ ವ್ಯವಸ್ಥೆ ಇದೆ.ಘಟಪ್ರಭಾ ಮತ್ತು ಮಲಪ್ರಭಾ ನದಿಗಳು ಕೃಷ್ಣಾ ನದಿಯೊಂದಿಗೆ ಸಂಗಮವಾಗಿವೆ. ಇದರ ಸಂಕೇತವಾಗಿ ಸಮುಚ್ಚಯದಲ್ಲಿ ಮಲಪ್ರಭಾ ಘಟಪ್ರಭಾ ಮತ್ತು ಕೃಷ್ಣಾ ಎಂದು ಮೂರು ಭಾಗಗಗಳನ್ನ್ನು ಹೆಸರಿಸಲಾಗಿದೆ.


   ಮಲಪ್ರಭಾ ಭಾಗದಲ್ಲಿ 15 ವಿಶಾಲವಾದ ಕೋಣೆಗಳಿವೆ ಪ್ರತಿ ಕೋಣೆಯಲ್ಲಿ 20 ಜನ ತಂಗಲು ಅವಕಾಶವಿದೆ. ಇಲ್ಲಿ ಸಾಮೂಹಿಕ ಸ್ನಾನಗೃಹ ಹಾಗೂ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಸಾಮಾನ್ಯ ಜನರಿಗೆ ಶೈಕ್ಷಣಿಕ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಿದೆ. ಒಬ್ಬರಿಗೆ ಒಂದು ದಿನಕ್ಕೆ ರೂ.40=00 ಗಳ ದರವಿದೆ.


   ಘಟಪ್ರಭಾದಲ್ಲಿ 25 ಕೋಣೆಗಳಿವೆ ಎಲ್ಲ ಕೋಣೆಗಳಿಗೆ ಪ್ರತ್ಯೇಕ ಸ್ನಾನಗೃಹ ಹಾಗೂ ಶೌಚಾಲಯಗಳಿವೆ ಪ್ರತಿ ಕೋಣೆಗೆ ಮಂಚ, ಗಾದಿ, ಮುಂತಾದ ಸೌಲಭ್ಯಗಳಿವೆ. ಮಧ್ಯಮ ವರ್ಗದ ಪ್ರವಾಸಿಗರಿಗೆ ಘಟಪ್ರಭಾ ಭಾಗ ಹೆಚ್ಚು ಸೂಕ್ತವಾಗಿದೆ. ಒಂದು ರೂಮಿಗೆ ಒಂದು ದಿನಕ್ಕೆ ರೂ.300=00+ತೆರಿಗೆ ದರಗಳು ಇರುತ್ತದೆ.
ಕೃಷ್ಣಾ ಭಾಗದಲ್ಲಿ 35 ಕೋಣೆಗಳಿವೆ ಇದನ್ನು ಉತ್ತಮವಾದ ಪರಿಕರಗಳೊಂದಿಗೆ ಸಿದ್ಧಪಡಿಸಲಾಗಿದೆ. ಮೇಲ್ವರ್ಗದ ಯಾತ್ರಾರ್ಥಿಗಳಿಗೆ ಹವಾನಿಯಂತ್ರಿತ ಕೊಠಡಿಗಳು, ದೂರವಾಣಿ ಸೌಲಭ್ಯ ದೂರದರ್ಶನ ಮುಂತಾದ ಸೌಲಭ್ಯಗಳಿವೆ. ಒಂದು ರೂಮಿಗೆ ಒಂದು ದಿನಕ್ಕೆ ರೂ.600=00+ತೆರಿಗೆ ದರಗಳು ಇರುತ್ತದೆ. ಹಾಗೂ ಹವಾನಿಯಂತ್ರಿತ 5 ಕೊಠಡಿಗಳಿವೆ ಅವುಗಳಿಗೆ ಒಂದು ದಿನಕ್ಕೆ ರೂ.1100+ತೆರಿಗೆ ದರ ಇರುತ್ತದೆ.
ಇಡೀ ವಸತಿ ಸಮುಚ್ಚಯಕ್ಕೆ ಒಂದೇ ಪ್ರವೇಶದ್ವಾರವಿದೆ. ಬಸವತತ್ವದ ಮೇಲೆ ಈ ಕಟ್ಟಡ ರೂಪಗೊಂಡಿದೆ. ಎಲ್ಲ ವರ್ಗದ ಜನ ಒಂದೇ ಕಡೆ ಸಂಗಮಿಸುವ ಸಂಕೇತವಿದು.


ಇವರನ್ನು ದೂರವಾಣಿ ಮೂಲಕ ಸಂಪರ್ಕ ಮಾಡುವುದಾದ ವಿಳಾಸ ಸ್ಥಿರ ಶ್ರೀ ಸಿದ್ದು ಮ್ಯಾನೆಜರ, ಜೈನ್ ದರ್ಶನ ಯಾತ್ರಿ ನಿವಾಸ ದೂರವಾಣಿ ನಂ.08351-268330, 268331 ಮೊಬೈಲ್ ನಂ.9481703104.

 

 

2) ಕೂಡಲಸಂಗಮ ಅತಿಥ ಗೃಹ :


   ಈ ಅತಿಥಿ ಗೃಹದಲ್ಲಿ ಒಟ್ಟು 6 ಕೋಣೆಗಳಿವೆ. ಅದರಲ್ಲಿ ಎರಡು ಅತಿ ಗಣ್ಯ ವ್ಯಕ್ತಿಗಳ ಹವಾನಿಯಂತ್ರಿತ ಕೊಠಡಿ, ನಾಲ್ಕು ಸಿಂಗಲ್ ರೂಮ್‍ಗಳು ಇವೆ. ಇಲ್ಲಿ ಹೆಚ್ಚಾಗಿ ಖಾಸಗಿ ವ್ಯಕ್ತಿಗಳಿಗೆ ಮುಂಗಡ ಬುಕ್ಕಿಂಗ್ ಮಾಡಲಾಗುವುದಿಲ್ಲ. ಏಕೆಂದರೆ ಕೂಡಲಸಂಗಮ ಸುಕ್ಷೇತ್ರಕ್ಕೆ ಅತಿಗಣ್ಯ ಹಾಗೂ ಗಣ್ಯ ವ್ಯಕ್ತಿಗಳು ಭೇಟಿ ನೀಡುತಿದ್ದು ಅವರುಗಳಿಗೆ ಶಿಷ್ಠಾಚಾರದ ನಿಮಿತ್ತ ವ್ಯವಸ್ಥೆ ಮಾಡಲಾಗುತ್ತದೆ. ಕೊಠಡಿಗಳು ಖಾಲಿ ಇರುವಾಗ ಮಾತ್ರ ನೀಡಲಾಗುವದು.

 

 

3) ಡಾರಮಿಟರಿ:


   ದೇವಸ್ಥಾನದ ಮುಖ್ಯ ರಸ್ತೆಯ ಬಲಭಾಗದಲ್ಲಿ ಸುಂದರವಾದ ಡಾರಮಿಟರಿ ಕಟ್ಟಡವನ್ನು ನಿರ್ಮಿಸಲಾಗಿದೆ. ಈ ವಸತಿ ಗೃಹವನ್ನು ಗುತ್ತಿಗೆಯ ಆಧಾರದ ಮೇಲೆ ನಿರ್ವಹಿಸಲು ಮೆ|| ಕಾಮತ್ ಯಾತ್ರಿ ನಿವಾಸ ಪ್ರೈ ಲಿಮಿಟೆಡ್ ಬೆಂಗಳೂರು ಇವರಿಗೆ ಕೊಡಲಾಗಿದೆ. ಒಟ್ಟು 130 ಜನ ತಂಗುವ ವ್ಯವಸ್ಥೆ ಈ ಕಟ್ಟಡದಲ್ಲಿದೆ.

ಇದರಲ್ಲಿ ಸ್ನಾನಗೃಹ ಮತ್ತು ಶೌಚಾಗಳಿವೆ. ಒಟ್ಟು 6 ಡಾರಮಿಟರಿಗಳಿವೆ ಹಾಗೂ 6 ಕೋಠಡಿಗಳಿವೆ.

ಡಾರಮಿಟರಿಗಳಲ್ಲಿ ಕೆಳವರ್ಗದ ಜನರಿಗೆ ಪ್ರತಿ ದಿನಕ್ಕೆ ರೂ.40=00ಗಳು ಹಾಗೂ ಕೊಠಡಿಗೆ ರೂ.100=00ಗಳ ದರ ಇರುತ್ತದೆ. ಸದರಿ ಡಾರಮಿರಿಯು ದೇವಸ್ಥಾನಕ್ಕೆ ಹತ್ತಿರವಿದೆ.

ಇದರಲ್ಲಿ ತಂಗುವ ಸಲುವಾಗಿ ಶ್ರೀ ಹೆಚ್. ಕೆ. ಲಕ್ಷ್ಮಣ ಮೊಬೈಲ್ ನಂ. 9739515028 ಅಥವಾ ಶ್ರೀ ಅರುಣ ಪೈ, ಮ್ಯಾನೆಜರ ಇವರನ್ನು ಮೊಬೈಲ್ ನಂ. 9663666377ರ ಮೂಲಕ ಸಂಪರ್ಕಿಸಬಹುದು.

 

 

4) ಬಸವ ಧರ್ಮ ಪೀಠದ ವಸತಿ ಗೃಹಗಳು:


   ಬಸವ ಧರ್ಮ ಪೀಠದಲ್ಲಿ ಜಗದ್ಗುರು ಪೂಜ್ಯ ಮಾತೆ ಮಹಾದೇವಿಯವರು ಅಂದಾಜು 20 ಎಕರೆ ಪ್ರದೇಶದಲ್ಲಿ ಮಂಡಳಿಯ ಸಂಕೀರ್ಣ ಹೊರತುಪಡಿಸಿ ಮಹಾಮನೆ ಮತ್ತು ವಸತಿ ಗೃಹಗಳನ್ನು ನಿರ್ಮಿಸಿದ್ದಾರೆ. ಅವುಗಳನ್ನು ಭಕ್ತಾಧಿಗಳಿಗೆ ಶಕ್ತ್ಯಾನುಸಾರ ದೇಣಿಗೆ ಮೂಲಕ ವಸತಿಗೃಹಗಳನ್ನು ವಸತಿಗಾಗಿ ನೀಡುತ್ತಿದ್ದು ಅಂದಾಜು ಒಂದು ದಿನಕ್ಕೆ 2500 ರಿಂದ 3000ಜನರು ವಾಸಿಸಬಹುದಾಗಿದೆ. ಈ ವಸತಿಗೃಹಗಳನ್ನು ಪಡೆಯಲಿಚ್ಛಿಸುವವರು ಪೂಜ್ಯ ಶ್ರೀ ಮಹಾದೇಶ್ವರ ಸ್ವಾಮೀಜಿಯವರನ್ನು ಸಂಪರ್ಕಿಸಬಹುದು ಅವರ

ದೂರವಾಣಿ ನಂ. 9483748266, 9341819847, ಮತ್ತು 08351-268224.

ವಸತಿ ಗೃಹಗಳು ಈ ಕೆಳಗಿನಂತಿವೆ.
1)ಸಿದ್ಧರಾಮೇಶ್ವರ ಶರಣಧಾಮ-24 ಡಾರಮಿಟರಿಗಳು 
2)ಅಕ್ಕನಾಗಲಾಂಬಿಕಾ ಶರಣಧಾಮ-50 ಸಿಂಗಲ್ ಕೊಠಡಿಗಳು
3)ಹರಳಯ್ಯ ಶರಣಧಾಮ-30 ಡಬಲ್ ರೂಮುಗಳು
4)ಶಾಂತರಸ ಶರಣಧಾಮ-30 ಕೊಠಡಿ
5)ಅಕ್ಕ ಮಹಾದೇವಿ ಶರಣಧಾಮ-18 ಸಿಂಗಲ್ ರೂಮು 
6) ಕಲ್ಯಾಣಮ್ಮ ಶರಣಧಾಮ-18 ಸಿಂಗಲ್ ರೂಮು 
7) ಸರ್ವಜ್ಞ ಶರಣಧಾಮ – 80 ಕೊಠಡಿ ಮತ್ತು ಡಾರಮಿಟರಿಗಳು ಇರುತ್ತವೆ.

 

 

5) ಲೋಕಪಯೋಗಿ ಇಲಾಖೆ ವಿಶ್ರಾಂತಿ ಗೃಹಗಳು:


   ಸರ್ಕಾರದ ಲೋಕಪಯೋಗಿ ಇಲಾಖೆ ವತಿಯಿಂದ ಮೂರು ಬೇರೆ ಬೇರೆ ವಿಶ್ರಾಂತಿ ಗೃಹಗಳನ್ನು ನಿರ್ಮಿಸಲಾಗಿದೆ. ಅದರಲ್ಲಿ ಎರಡು ಮೊದಲಿನ ಕಟ್ಟಡಗಳು ಇದ್ದು ಒಂದು ಕಟ್ಟಡದಲ್ಲಿ ಎರಡು ವ್ಹಿಐಪಿ ಸೂಟ್‍ಗಳಿವೆ. ಮತ್ತೋಂದು ಕಟ್ಟಡದಲ್ಲಿ ನಾಲ್ಕು ಸಾದಾ ಕೊಠಡಿಗಳಿವೆ. ಇದೀಗ ಹೊಸದಾಗಿ ನಾಲ್ಕು ವ್ಹಿಐಪಿ ಹವಾನಿಯಂತ್ರಿತ ಸೂಟ್‍ಗಳನ್ನು ನಿರ್ಮಿಸಲಾಗಿದೆ. ಇವುಗಳನ್ನು ಸರ್ಕಾರದಿಂದ ನಿಗದಿಪಡಿಸಿದ ದರಗಳಂತೆ ಪಾವತಿಸಿ ಈ ಸೌಲಭ್ಯ ಪಡೆಯಬಹುದು.

ಅವುಗಳನ್ನು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಲೋಕಪಯೋಗಿ ಇಲಾಖೆ, ಹುನಗುಂದ ಇವರಿಗೆ ಮುಂಗಡವಾಗಿ ಪತ್ರವ್ಯವಹಾರದ ಮೂಲಕ ಕಾಯ್ದಿರಿಸಬಹುದಾಗಿದೆ. ಅಥವಾ ಸದರಿ

ಐ.ಬಿ ಕೇರ್ ಟೇಕರ್ ಶ್ರೀ ಈರಪ್ಪ ನಾಗೂರ ಇವರ ದೂರವಾಣಿ ನಂ.7760164220ರ ಮೂಲಕ ಸಂಪರ್ಕಿಸಬಹುದಾಗಿದೆ.

 

 

6) ಕಾನ್ಫರೆನ್ಸ/ಮಿಟಿಂಗ್ ಹಾಲ್ :

 

   ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಕಾರ್ಯಾಲಯದ ಮೊದಲನೆ ಅಂತಸ್ತಿನಲ್ಲಿ ಸುಸಜ್ಜಿತವಾದ ಕಾನ್ಫರೆನ್ಸ ಅಥವಾ ಸಭಾಂಗಣ ನಿರ್ಮಾಣ ಮಾಡಲಾಗಿದೆ. ಇದರಲ್ಲಿ ಸರ್ಕಾರಿ, ಅರೆಸರ್ಕಾರಿ, ಸಂಘ ಸಂಸ್ಥೆಗಳಿ ತಮ್ಮ ಸಭೆಗಳನ್ನು ನಡೆಸಬಹುದಾಗಿದೆ. ಸದರಿ ಸಭಾಂಗಣದಲ್ಲಿ

ಒಂದು ನೂರು ಜನ ಕುಳತು ಸಭೆ ನಡೆಸಬಹುದಾಗಿದೆ. ಧ್ವನಿ-ಬೇಳಕಿನ ವ್ಯವಸ್ಥೆ ಹಾಗೂ ಎಲ್.ಸಿ.ಡಿ ಪ್ರೋಜೆಕ್ಟರ್ ಮತ್ತು ಪರದೆ ವ್ಯವಸ್ಥೆ ಇರುತ್ತದೆ.

ಇದಕ್ಕಾಗಿ ಶ್ರೀ ಕೆ. ಎನ್ ಕೋಟೂರ ದ್ವಿ.ದ.ಸ ಇವರನ್ನು ಮೊಬೈಲ್ ನಂ. 9482614329 ರ ಮೂಲಕ ಸಂಪರ್ಕಿಸಿ ಕಾಯ್ದಿರಿಸಬಹುದಾಗಿದೆ.

 


7) ಸಭಾ ಭವನ :

 

   ವಿಶ್ವವಿಖ್ಯಾತ ಗೋಳ ಗುಮ್ಮಟದ ಇಮ್ಮಡಿ ವಿಸ್ತಾರ ಹೊಂದಿದ ವೃತ್ತಕಾರದ ಸಭಾಗೃಹ ಕೂಡಲಸಂಗಮದ ಪ್ರಮುಖ ಆಕರ್ಷಣೆ. ಇದು ಏಷಿಯಾದಲ್ಲಿಯೇ ಅತಿ ದೊಡ್ಡ ಗುಮ್ಮಟ ಪ್ರವೇಶದ ನಾಲ್ಕು ದ್ವಾರಗಳ ಮೇಲೆ ಚಾಲುಕ್ಯ ಶೈಲಿಯ ಗೋಪುರಗಳು, ರೋಮನ್ ವಾಸ್ತು ಶಿಲ್ಪದ ಎಪ್ಪತ್ತೇರಡು ಕಂಬಗಳು, ಗುಮ್ಮಟದಲ್ಲಿ ಬೌದ್ದ ಸಸತೂಪ ಶೈಲಿಯ ವಾತಾಯನಗಳು, ಇಸ್ಲಾಮಿಕ್ ವಾಸ್ತು ಶಿಲ್ಪದ ಗುಮ್ಮಟ, ಗ್ರಿಕ್ ಮಾದರಿಯ ಬೃಹತ್ ವೇದಿಕೆ ಈ ಐದು ವಸ್ತು ಶಿಲ್ಪ ಮಾದರಿಗಳು ಸಂಗಮವಿದು.

   ಸಭಾಗೃಹದಲ್ಲಿ ಪ್ರತಿದ್ವನಿ ನಿರೋಧಕ ವ್ಯವಸ್ಥೆ ಇದೆ. ಗುಮ್ಮಟದ ಮೇಲ್ಪದರಿನಲ್ಲಿ ಸ್ಪೇನ್ಲೇಸ್‍ಸ್ಟೀಲ್ ಫಲಕ ಹೊದಿಕೆ, ಅದರ ಕೆಳಗೆ ಗ್ಯಾಸ್ ವೂಲ್ ಪದರು ಇದೆ ಅದರ ಕೆಳಗೆ ರಂದ್ರವುಳ್ಳ ಅಲ್ಯುಮಿನಿಯಂ ತಗಡುಗಳಿಂದಾಗಿ ಪ್ರತಿದ್ವನಿ ನೀರೋಧಕ ವ್ಯವಸ್ಥೆಯನ್ನು ನಿರ್ಮಿಸಲಾಗಿದೆ.


   ಐದು ಸಾವಿರ ಸ್ಥಿರ ಆಸನಗಳು ವೃತ್ತಾಕಾರದಲ್ಲಿವೆ. ಅಂತರಾಷ್ಟ್ರೀಯ ಮಾನಕಗಳಿಗೆ ಅನುಗುಣವಾಗಿ ವೇದಿಕೆ ನಿರ್ಮಾಣವಾಗಿದೆ. ಮತ್ತು ಎರಡು ಪ್ರತ್ಯೇಕ ಗ್ರೀನ್ ಕೊಠಡಿಗಳು, ವಿಶ್ವಾಂತಿಗಾಗಿ ಕೊಠಡಿಗಳು ಸೌಲಭ್ಯ ಇದೆ. ವೇದಿಕೆಯಲ್ಲಿ ನೃತ್ಯ ಇತ್ಯಾದಿ ಕಾರ್ಯಕ್ರಮ ನಡೆಸಲು ಕಟ್ಟಿಗೆಯ ಹೆಲ ಹಾಸು ಒದಗಿಸಲಾಗಿದೆ. ವೇದಿಕೆಗೆ ಹೊಂದಿಕೊಂಡಂತೆ ಅಅನುಭವಿ ಹಾಗೂ ಖ್ಯಾತ ರಂಗ ಕರ್ಮಿಗಳ ಹಾಗೂ ತಂತ್ರಜ್ಞರ ಮಾರ್ಗದರ್ಶನದಲ್ಲಿ ನಿರ್ಮಿಸಲಾದ ಬೆಳಕು, ಧ್ವನಿ,ವ್ಯವಸ್ಥೆ ಇದೆ.

   ಪ್ರಸಾಧನ ಕೊಠಡಿಗಳಿವೆ ಕಲಾವಿದರಿಗೆ ವಸತಿ ಸೌಕರ್ಯವೂ ಇದೆ. ಅತೀ ಗಣ್ಯರಿಗೆ ವಿಶೇಷ ಪ್ರವೇಶದ್ವಾರವಿದೆ. ಪ್ರೇಕ್ಷಕ ಯಾವ ಆಸನದಿಂದ ವೀಕ್ಷಿಸಿದರೂ ನೇರ ನೋಟ ಲಭ್ಯವಿದೆ. ಸಭಾ ಭವನದ ಪಕ್ಕದಲ್ಲಿಯೇ ಹೆಲಿಪ್ಯಾಡ್ ನಿರ್ಮಿಸಲಾಗಿದೆ.


   ಸಭಾ ಭವನದ ಒಳವ್ಯಾಸ ಎರನೂರ ಐದು ಅಡಿಗಳಿದ್ದು ಹೊರವ್ಯಾಸ ಎರಡನೂರಾ ಇಪ್ಪತ್ತಾರು ಅಡಿಗಳಾಗಿದ್ದು ಮಧ್ಯಭಾಗದಲ್ಲಿ ಗುಮ್ಮಟದ ಎತ್ತರ ಒಂದನೂರ ಅಡಿ ಇದೆ. ಮೇಲಿನ ಕಳಸದ ಎತ್ತರವೇ ಹದಿನೈದು ಅಡಿ ಇದೆ.

   ಇದಕ್ಕಾಗಿ ಒಂದು ಜನರೇಟರ್ ವ್ಯವಸ್ಥೆ ಇದೆ. ಇದನ್ನು ಮದುವೆ ಅಥವಾ ದೊಡ್ಡ ದೊಡ್ಡ ಸಭೆಗಳನ್ನು ನಡೆಸಲು ಪಡೆಯಬಹುದಾಗಿದೆ. ಒಂದು ದಿನಕ್ಕೆ ರೂ 27500=00ಗಳನ್ನು ದರ ನಿಗದಿಪಡಿಸಲಾಗಿದೆ.

ಇದಕ್ಕಾಗಿ ಶ್ರೀ ಕೆ. ಎನ್ ಕೋಟೂರ ದ್ವಿ.ದ.ಸ ಇವರನ್ನು ಮೊಬೈಲ್ ನಂ. 9482614329 ರ ಮೂಲಕ ಸಂಪರ್ಕಿಸಿ ಕಾಯ್ದಿರಿಸಬಹುದಾಗಿದೆ.

 


8) ಶ್ರೀ ಸಂಗಮೇಶ್ವರ ಕಲ್ಯಾಣ ಮಂಟಪ :


   ಬಸವ ವೃತ್ತ ದಿಂದ ದೇವಸ್ಥಾನಕ್ಕೆ ಹೋಗುವ ಕೆಳಗಿನ ರಸ್ತೆಯ ಬಲಭಾಗದಲ್ಲಿ ಸುಸಜ್ಜಿತವಾದ ಕಲ್ಯಾಣ ಮಂಟಪ ನಿರ್ಮಾಣ ಮಾಡಲಾಗಿದೆ.

ಇಲ್ಲಿ ಮದುವೆ ಸಿಮಂತ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಮಾಡಬಹುದಾಗಿದೆ. ಇದರಲ್ಲಿ ಮದುವೆ ಸಲುವಾಗಿ ಒಂದು ದೊಡ್ಡ ಹಾಲ್ ಸ್ಟೇಜ್, ನಾಲ್ಕು ರೂಮುಗಳ ವ್ಯವಸ್ಥೆ ಇದೆ. ಇದನ್ನು ಹೊರತುಪಡಿಸಿ ಪ್ರತ್ಯೇಕ ಡೈನಿಂಗ್ ಹಾಲ್ ಕಿಚನ್ ರೂಮು ಇರುತ್ತದೆ.

ಒಂದು ದಿನಕ್ಕೆ ರೂ 6500=00ಗಳನ್ನು ದರ ನಿಗದಿಪಡಿಸಲಾಗಿದೆ.

ಇದಕ್ಕಾಗಿ ಶ್ರೀ ಕೆ. ಎನ್ ಕೋಟೂರ ದ್ವಿ.ದ.ಸ ಇವರನ್ನು ಮೊಬೈಲ್ ನಂ. 9482614329 ರ ಮೂಲಕ ಸಂಪರ್ಕಿಸಿ ಕಾಯ್ದಿರಿಸಬಹುದಾಗಿದೆ.

 


9) ಶ್ರೀ ಸಂಗಮೆಶ್ವರ ದೇವಸ್ಥಾನದ ಸಂಕೀರ್ಣದ ಆರವಣ :


   ಶ್ರೀ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ಎರಡು ಬದಿಗೆ ಪೌಳಿಗಳ ವ್ಯವಸ್ಥೆ ಇದೆ. ಹಾಗೂ ಮೆಟ್ಯಾಕ್ಯೂಲರ ಸೀಟ್‍ನ ಹೊದಿಕೆ ಮಾಡಿದ ಮತ್ತೊಂದು ದೊಡ್ಡ ಹಾಲ್ ಇದೆ ಮತ್ತು ದೇವಸ್ಥಾನದ ಆವರಣದಲ್ಲಿ ಕೆಳವರ್ಗದವರು ಕಡಿಮೆ ಖರ್ಚಿನಲ್ಲಿ ಮದುವೆಗಳನ್ನು ಮಾಡಲು ಮಂಗಲಭವನ ಇದೆ.

ಇದರಲ್ಲಿ ಮೂರು ಕೊಠಡಿಗಳಿವೆ. ಹಾಗೂ ದೇವಸ್ಥಾನದ ಆವರಣದಲ್ಲಿ ಪ್ರತ್ಯೇಕ ಕಿಚನ್ ರೂಮ ವ್ಯವಸ್ಥೆ ಇದೆ. ಇದರ ದರ ದಿನಕ್ಕೆ ರೂ. 1000-00 ಗಳು ಇರುತ್ತದೆ.

ಇದಕ್ಕಾಗಿ ಶ್ರೀ ಕೆ. ಜಿ ಯಡಹಳ್ಳಿಮಠ ದ್ವಿ.ದ.ಸ ಇವರನ್ನು ಮೊಬೈಲ್ ನಂ. 9481081713 ರ ಮೂಲಕ ಸಂಪರ್ಕಿಸಿ ಕಾಯ್ದಿರಿಸಬಹುದಾಗಿದೆ.