ಕೂಡಲ ಸಂಗಮ ಅಭಿವೃದ್ಧಿ ಮಂಡಳಿ

    ಕಂದಾಯ ಇಲಾಖೆ, ಕರ್ನಾಟಕ ಸರಕಾರ

    ಶರಣರ ಬರುವೆಮಗೆ ಪ್ರಾಣ ಜೀವಾಳವಯ್ಯ

Jatra

Jatraa

ಕೂಡಲ ಸಂಗಮ ಅಭಿವೃದ್ಧಿ ಮಂಡಳಿ


ಶ್ರೀ ಕೂಡಲಸಂಗಮೇಶ್ವರ ಜಾತ್ರಾ ಕಾರ್ಯಕ್ರಮಗಳು


      ಶ್ರೀ ಕೂಡಲಸಂಗಮೇಶ್ವರ ರಥೋತ್ಸವವು ದಿನಾಂಕ:09-04-2015 ರಂದು ಸಂಜೆ 5-30 ಗಂಟೆಗೆ ನೆರವೇರಿತು, ಸದರಿ ಜಾತ್ರೆಯನ್ನು ವಿಜೃಂಭನೆಯಿಂದ ಆಚರಿಸುವ ಸಲುವಾಗಿ ಪೂರ್ವಿಭಾವಿ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ರಥೋತ್ಸವ ಸಂದರ್ಭದಲ್ಲಿ ಹೆಲಿಕ್ಯಾಪ್ಟರ್ ಮುಖಾಂತರ ರಥಕ್ಕೆ ಮತ್ತು ಶ್ರೀ ಸಂಗಮೇಶ್ವರ ದೇವಸ್ಥಾನಕ್ಕೆ ಪುಷ್ಪವೃಷ್ಠಿ ಮಾಡಲಾಯಿತು. ಇದಲ್ಲದೆ ಸದರಿ ದೇವಸ್ಥಾನಕ್ಕೆ ಆದಿ ಆನಾದಿ ಕಾಲದಿಂದಲೂ ಸುತ್ತಮುತ್ತಲಿನ ಗ್ರಾಮಸ್ಥರೆಲ್ಲರೂ ಸೇರಿ ಈ ಜಾತ್ರೆಯನ್ನು ಮಾಡುವ ಬಹಳ ವಿಶೇಷ. ಕಾರಣ ವಿಶೇಷವಾಗಿ ಸದರಿ ಜಾತ್ರಾ ಸೇವೆಯನ್ನು ಮಾಡುವವರು ಆಯಾ ಗ್ರಾಮದ ಪ್ರಮುಖ ಮನೆತನದವರು ಅವರನ್ನು ಬಾಬುದವರೆಂದು ಕರೆಯುತ್ತಾರೆ. ಮೊದಲಿಗೆ ಶ್ರೀ ಸಂಗಮೇಶ್ವರ ರಥದ ಬಂಘಾರ ಕಳಸವು ಬಾಗಲಕೋಟ ಜಿಲ್ಲಾ ಖಜಾನೆಯ ಸುಪರ್ದಿಯಲ್ಲಿರುತ್ತದೆ. ಅದನ್ನು ಕೂಡಲಸಂಗಮ ಗ್ರಾಮದ ಬೂದುರಿ, ಗೊರಚಿಕ್ಕನವರ ಹಾಗೂ ಪೂಜಾರಿ ಮನೆತನದವರು ಪಾದಯಾತ್ರೆ ಮುಖಾಂತರ ಬಂದು ಮರಳಿ ನೀಡುವುದು ಇವರ ಜವಾಬ್ದಾರಿ ಇರುತ್ತದೆ. ಬೆಳಗಲ್ ಗ್ರಾಮದಿಂದ ರಥದ ಹಗ್ಗವನ್ನು ತರುತ್ತಾರೆ. ಇದ್ದಲಗಿ ಗ್ರಾಮದಿಂದ ಹಿಲಾಲ(ಪಂಜು) ಮತ್ತು ಗಂಜಿಹಾಳ ಗ್ರಾಮದಿಂದ ತಳಿರು ಬಾಳೆಕಂಬದ ತೋರಣ ತರುತ್ತಾರೆ. ಈ ಎಲ್ಲ ಬಾಬದªರು 4-00 ಗಂಟೆಯೊಳಗಾಗಿ ರಥಕ್ಕೆ ಬಂಗಾರದ ಕಳಸ, ಹಗ್ಗ ಹಾಗೂ ಬಾಳೆಕಂಬ, ತಳಿಲು ತೋರಣ ಇತ್ಯಾದಿಗಳನ್ನು ಭಕ್ತಿಭಾವದಿಂದ ಮೆರವಣಿಗೆ ಮೂಲಕ ತಂದು ಶ್ರೀ ಸಂಗಮೇಶ್ವರ ರಥಕ್ಕೆ ಶೃಂಗಾರ ಮಾಡಿದ ನಂತರವೇ ರಥವನ್ನು ಎಳೆಯಲಾಗುವುದು. ಇದಲ್ಲದೆ ಜಾತ್ರಾ ಅಂಗವಾಗಿ ಈ ಕೆಳಗಿನ ಸಾಂಸ್ಕøತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.


ಈ ವರ್ಷ ಕಳೆದ ವರ್ಷಕ್ಕಿಂತ ವಿಭಿನ್ನವಾಗಿ ಹೆಚ್ಚುವರಿ ಕಾರ್ಯಕ್ರಮಗಳನ್ನು ಜರುಗಿಸಲಾಯಿತು ಅವುಗಳೆಂದರೆ ಶ್ರೀ ಸಂಗಮೆಶ್ವರ ರಥಕ್ಕೆ ಮತ್ತು ದೇವಸ್ಥಾನಕ್ಕೆ ಹೆಲಿಕಾಪ್ಟರ ನಿಂದ ಪುಷ್ಪವೃಷ್ಠಿ ಮಾಡಿಸಲಾಯಿತು. ಹಾಗೂ ರಂಗೋಲಿ ಸ್ಪರ್ಧೆ, ವಚನ ಗಾಯನ ಸ್ಪರ್ಧೆ , ವಸ್ತು ಪ್ರದರ್ಶನ ಮಳಿಗೆಗಳು ಹಾಗೂ ಜಾನುವಾರ ಜಾತ್ರೆಯನ್ನು ಅತ್ಯಂತ ಯಶಸ್ವಿಯಾಗಿ ನೆರೆವೇರಿಸಲಾಯಿತು.


ದಿನಾಂಕ: 01-04-2015 ರಿಂದ ಜಾತ್ರಾ ಕಾರ್ಯಕ್ರಮಗಳು ಪ್ರಾರಂಭವಾದವು ಈ ದಿನದಿಂದ ಪಲ್ಲಕ್ಕಿ ಉತ್ಸವ ಬೆಳಿಗ್ಗೆ 4.00 ರಿಂದ 6.00 ಗಂಟೆಯವರೆಗೆ ಸುಮಂಗಲೆಯರಿಂದ ಕಳಸ ಕನ್ನಡಿಯೊಂದಿಗೆ ಬಸವ ಪಟ ಧ್ವಜಾರೋಹಣ ಪೂಜಾ ಕಾರ್ಯಕ್ರಮ


ದಿನಾಂಕ:04-04-2015 ರಿಂದ 09-04-2015 ರ ವರೆಗೆ ಪ್ರತಿದಿನ ರಾತ್ರಿ 12.00 ರಿಂದ ಬೆಳಿಗ್ಗೆ 3.00 ರವೆಗೆ ಶ್ರೀ ಸಂಗಮೇಶ್ವರ ಪುರವಂತಿಕೆ ಸೇವಾ ಸಂಘ ಕೂಡಲಸಂಗಮ ಇವರಿಂದ ಪುರವಂತಿಕೆ ಸೇವಾ ಕಾರ್ಯಕ್ರಮ


ದಿನಾಂಕ:05-04-2015 ಸಾಯಂಕಾಲ 6-00 ಘಂಟೆಗೆ ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ಬಸವ ವೇದಿಕೆ, ಸಭಾ ಭವನ, ಕೂಡಲಸಂಗಮ ಸಾನಿಧ್ಯ ಪೂಜ್ಯ ಶ್ರೀ ಜಗದ್ಗುರು ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು, ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠ ಕೂಡಲಸಂಗಮ ಮತ್ತು ಶ್ರೀ. ಷ. ಬ್ರ. ಅಭಿನವ ಜಾತವೇದಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಸಾರಂಗಮಠ, ಕೂಡಲಸಂಗಮ


ಉದ್ಘಾಟನೆ : ಡಾ|| ವಿಜಯಾನಂದ ಎಸ್. ಕಾಶಪ್ಪನವರ, ಜನಪ್ರಿಯ ಶಾಸಕರು, ಹುನಗುಂದ ಇವರಿಂದ


ಅಧ್ಯಕ್ಷತೆ: : ಶ್ರೀ ಮಹದೇವ ಎ. ಮುರಗಿ ಕೆ.ಎ.ಎಸ್. ಆಯುಕ್ತರು ಕೂಡಲಸಂಗಮ ಅಭಿವೃದ್ಧಿ ಮಂಡಳಿ,


ನಂತರ ವಚನ ನೃತ್ಯ ಕಾರ್ಯಕ್ರಮ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಬಾಗಲಕೋಟ ಇವರಿಂದ

ದಿನಾಂಕ:06-04-2015 ರಂದು ಮುಂಜಾನೆ 11.00 ಗಂಟೆಗೆ ವಸ್ತು ಪ್ರದರ್ಶನದ ಉದ್ಘಾಟನೆ ಕಾರ್ಯಕ್ರಮ

ಮಾನ್ಯ ಶ್ರೀ ಶಿವಯೋಗಿ ಸಿ ಕಳಸದ, ಭಾ.ಆ.ಸೇ. ರಾಜ್ಯ ಆಯುಕ್ತರು, ಪುಪು & ಭೂಸ್ವಾಧೀನ ಹಾಗೂ ಸರ್ಕಾರದ ಪದನಿಮಿತ್ತ ಕಾರ್ಯದರ್ಶಿಗಳು, ಕಂದಾಯ ಇಲಾಖೆ ಹಾಗೂ ವಿಶೇಷಾಧಿಕಾರಿಗಳು, ಕೂಡಲಸಂಗಮ ಅಭಿವೃದ್ಧಿ ಮಂಡಳಿ, ಬೆಂಗಳೂರು ಇವರಿಂದ


ಸಂಜೆ 7-00 ಗಂಟೆಗೆ ಸುಗಮ ಸಂಗೀತ, ಜನಪದ, ಭಕ್ತಿಭಾವ, ವಚನ ಗಾಯನ, ಸುಶೀರ ಸ್ವರಸಂಗಮ (ರಿ) ಬೆಂಗಳೂರು ಇವರಿಂದ ಕಾರ್ಯಕ್ರಮ


ದಿನಾಂಕ:07-04-2015 : ಸಂಜೆ 7-00 ಗಂಟೆಗೆ ಜರ್ಮನ ಬಂಗ್ಲೆ ನಾಟಕ ಶಿವಕುಮಾರ ಕಲಾಸಂಘ ಸಾಣೆಹಳ್ಳಿ ಇವರಿಂದ


ದಿನಾಂಕ:08-04-2015 ಉತ್ಸವ ಮೂರ್ತಿ ರಥೋತ್ಸವ ಬೆಳಿಗ್ಗೆ, 6-00ಘಂಟೆಗೆ ಮುಂಜಾನೆ 11-00 ಗಂಟೆಗೆ ವಚನ ಪಠಣ ಸ್ಪರ್ಧೆ ದೇವಸ್ಥಾನ ಆವರಣದಲ್ಲಿ (ಅತಿ ಹೆಚ್ಚು ವಚನಗಳನ್ನು ನೋಡದೆ ಹೇಳುವ ಮೂರು ಜನ ವಿಜೇತರಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ನೀಡಲಾಯಿತು. 
ಸಂಜೆ 7-00 ಗಂಟೆಗೆ ಚಿಕ್ಕದೇವಭೂಪ ನಾಟಕ ಶಿವಕುಮಾರ ಕಲಾಸಂಘ ಸಾಣೆಹಳ್ಳಿ ಇವರಿಂದ


ದಿನಾಂಕ:09-04-2015 : ಉತ್ಸವ ಮೂರ್ತಿ ರಥೋತ್ಸವ ಬೆಳಿಗ್ಗೆ, 6-00ಘಂಟೆಗೆ 
ಮುಂಜಾನೆ 7-30 ರಿಂದ 8-30 ರವರೆಗೆ ರಂಗೋಲಿ ಸ್ಪರ್ಧೆ, ದೇವಸ್ಥಾನದ ಪಾದಗಟ್ಟಿ ಆವರಣದಲ್ಲಿ ನೇರವೇರಿಸಲಾಯಿತು. 
ಮುಂಜಾನೆ 10-00 ಘಂಟೆಯಿಂದ 5-00 ಗಂಟೆವರೆಗೆ ಭಜನಾ ಹಾಗೂ ಕರಡಿ ಮಜಲು ಕಾರ್ಯಕ್ರಮ
ಸಾಯಂಕಾಲ 5-30 ಘಂಟೆಗೆ ಶ್ರೀ ಸಂಗಮೇಶ್ವರ ರಥೋತ್ಸವ ಜರುಗಿತು. ಸದರಿ ರಥೋತ್ಸವಕ್ಕೆ ಹೆಲಿಕಾಪ್ಟರನಿಂದ ಪುಷ್ಪವೃಷ್ಟಿ ಮಾಡಲಾಯಿತು. ತದನಂತರ ರಾತ್ರಿ 7-30 ರಿಂದ ವರ್ಣರಂಜಿತ ಪಟಾಕಿ ಪ್ರದರ್ಶನ ನಡೆಯತು
ರಾತ್ರಿ 8.00 ರಿಂದ 10.30 ಗಂಟೆವರೆಗೆ ವಿನುರ ವೇಮ ನಾಟಕ ಶಿವಕುಮಾರ ಕಲಾಸಂಘ ಸಾಣೆಹಳ್ಳಿ ಇವರಿಂದ


ರಥೋತ್ಸವ ದಿವಸ ಮುಂಜಾನೆ 11-00 ರಿಂದ ರಾತ್ರಿ 10-00 ಘಂಟೆಯವರೆಗೆ ದಾಸೋಹಭವನದಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿರುತ್ತದೆ.

ತಮಗೆ ಸ್ವಾಗತ ಕೋರುವ
ಮಹಾದೇವ ಎ ಮುರಗಿ, ಕೆ.ಎ.ಎಸ್. ಆಯುಕ್ತರು, ಕೂಡಲಸಂಗಮ ಅಭಿವೃದ್ಧಿ ಮಂಡಳಿ, ಹಾಗೂ ಸದ್ಭಕ್ತ ಮಂಡಳಿ, ಕೂಡಲಸಂಗಮ



ಆಯುಕ್ತರು
ಕೂಡಲಸಂಗಮ ಅಭಿವೃದ್ಧಿ ಮಂಡಳಿ, ಬೆಂಗಳೂರು