ಕೂಡಲ ಸಂಗಮ ಅಭಿವೃದ್ಧಿ ಮಂಡಳಿ

    ಕಂದಾಯ ಇಲಾಖೆ, ಕರ್ನಾಟಕ ಸರಕಾರ

    ಶರಣರ ಬರುವೆಮಗೆ ಪ್ರಾಣ ಜೀವಾಳವಯ್ಯ

ಸಂಪರ್ಕಿಸಿ

08351-268060

style="color: #000000 !important"ಕಛೇರಿ ದೂರವಾಣಿ

ವಿಳಾಸ

ಕೂಡಲ ಸಂಗಮ ಅಭಿವೃದ್ಧಿ ಮಂಡಳಿ

ಕೂಡಲ ಸಂಗಮ - 587 112

ತಾ: ಹುನಗುಂದ ಜಿಲ್ಲಾ: ಬಾಗಲಕೋಟ

ಕಛೇರಿ ಸಮಯ

  • ಸೋಮ - ಶನಿ - 10:00 AM - 5:30 PM
  • ಭಾನುವಾರ - ರಜೆ

ಐತಿಹಾಸಿಕ ಮತ್ತು ಪುಣ್ಯ ಕ್ಷೇತ್ರಕ್ಕೆ ಸ್ವಾಗತ

ಕೂಡಲ ಸಂಗಮವು ಐತಿಹಾಸಿಕ ಮತ್ತು ಪುಣ್ಯ ಕ್ಷೇತ್ರವಾಗಿದ್ದು, ಭೌಗೋಳಿಕವಾಗಿ ಮಲಪ್ರಭಾ ಹಾಗೂ ಕೃಷ್ಣ ನದಿಗಳ ಸಂಗಮದ ವಿಶೇಷ ಸ್ಥಳವಾಗಿದೆ. ಈ ಕ್ಷೇತ್ರವನ್ನು ಆಧ್ಯಾತ್ಮಿಕ ಹಾಗೂ ಪ್ರೇಕ್ಷಣೀಯ ಪ್ರವಾಸಿ ತಾಣವಾಗಿಸುವ ಉದ್ದೇಶದಿಂದ ಕೂಡಲ ಸಂಗಮ ಅಭಿವೃದ್ಧಿ ಮಂಡಳಿಯು, ಕರ್ನಾಟಕ ಸರಕಾರದ ೧೯೯೪ ರ ಕಾಯ್ದೆಯಂತೆ ಸ್ಥಾಪಿಸಲ್ಪಟ್ಟು ಕಾರ್ಯ ನಿರ್ವಹಿಸುತ್ತಿದೆ

ಹೆಚ್ಚಿನ ಮಾಹಿತಿ

ಮುಂಬರುವ ಕಾರ್ಯಕ್ರಮಗಳು

service-image

ಸೌಲಭ್ಯಗಳು

ಕೂಡಲ ಸಂಗಮ ಅಭಿವೃದ್ದಿ ಮಂಡಳಿಯು ಹಲವಾರು ವಿಶ್ವ ದರ್ಜೆಯ ಸೌಲಭ್ಯಗಳನ್ನು, ಕಟ್ಟಡಗಳನ್ನು ನಿರ್ಮಿಸಿದ್ದು, ಎಲ್ಲ ಭಕ್ತಾದಿಗಳು ಹಾಗೂ ಪ್ರವಾಸಿಗರಿಗೆ ಅನಕೂಲಗಳನ್ನು ನೀಡುವುದರ ಉದ್ದೇಶವನ್ನು ಹೊಂದಿದೆ.

ಕ್ಷೇತ್ರದಲ್ಲಿರುವ ಸೌಲಭ್ಯಗಳು

  • ಸಭಾಭವನ
  • ಯಾತ್ರಾ ನಿವಾಸ
  • ವಸತಿ ಗೃಹ
  • ವಿಶ್ರಾಂತಿ ಗೃಹಗಳು
  • ಕಾನ್ಫರೆನ್ಸ/ಮಿಟಿಂಗ್ ಹಾಲ್
  • ಕಲ್ಯಾಣ ಮಂಟಪ
ಹೆಚ್ಚಿನ ಮಾಹಿತಿ
service-image

ವಚನಗಳು

ಮಂಡಳಿಯು ವಚನ ಸಾಹಿತ್ಯಗಳ ಸಂಗ್ರಹಣೆ ಮತ್ತು ಅಧ್ಯಯನ ಹಾಗೂ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿದ್ದು ವಚನಗಳನ್ನು ಮುಂದಿನ ಪೀಳಿಗೆಗೆ ನೀಡುವುದರ ಮೂಲಕ ಶಿವ ಶರಣರ ವಿಚರಗಳನ್ನು ಪ್ರಚಾರ ಕಾರ್ಯದಲ್ಲಿ ತೊಡಗಿದೆ

ದಯವಿಲ್ಲದ ಧರ್ಮವಾವುದಯ್ಯಾ ?
ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ
ದಯವೇ ಧರ್ಮದ ಮೂಲವಯ್ಯೂ
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯೂ !!

ಹೆಚ್ಚಿನ ಮಾಹಿತಿ
service-image

ದಾಸೋಹ

ಎಲ್ಲ ಆಸಕ್ತ ಭಕ್ತರು ದೇವಸ್ಥಾನದ ದಾಸೋಹ ಕಾರ್ಯದಲ್ಲಿ ಸೇವೆ ಸಲ್ಲಿಸಲೆಂದು ಮಂಡಳಿಯು ಭಕ್ತರಿಗೆ ದೇಣಿಗೆ ಸಲ್ಲಿಸಲು ಅವಕಾಶ ನೀಡಿದೆ. ವಿಶೇಷ ಹಾಗೂ ದೈನಂದಿನ ದಿನಗಳಲ್ಲಿ ದಾಸೋಹಕ್ಕಾಗಿ ಧನ ಸೇವೆಯನ್ನು ಮಾಡಬಹುದಾಗಿದೆ. ಆದ್ದರಿಂದ ಎಲ್ಲ ಭಕ್ತಾದಿಗಳನ್ನು ದಯವಿಟ್ಟು ದಾಸೋಹ ಪುಟದಲ್ಲಿನ ಸೇವಾ ದರದ ಮಾಹಿತಿಯನ್ನು ನೋಡಲು ಕೋರಲಾಗಿದೆ.

ಹೆಚ್ಚಿನ ಮಾಹಿತಿ
service-image

ಜಾತ್ರೆ

ಕೂಡಲ ಸಂಗಮೇಶ್ವರ ಜಾತ್ರಾ ಮಹೋತ್ಸವವು ಪ್ರತಿ ವರ್ಷ ಮಾರ್ಚ್ - ಏಪ್ರಿಲ್ ತಿಂಗಳಿನಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗುವುದು. ಸುತ್ತ ಮುತ್ತಲಿನ ಎಲ್ಲ ಗ್ರಾಮಸ್ಥರು ಜಾತ್ರಾ ಮಹೋತ್ಸವದ ಪ್ರತಿ ಕೆಲಸದ ಜವಾಬ್ದಾರಿಯನ್ನು ವಹಿಸಿಕೊಂಡಿರುತ್ತಾರೆ. ಇದೆಲ್ಲದರ ಜೊತೆಗೆ ಮಂಡಳಿಯು ಹಲವಾರು ರೀತಿಯ ಸಾಂಸ್ಕೃತಿಕ ಕಾರ್ಯಾಕ್ರಮಗಳನ್ನು ಹಮ್ಮಿಕೊಳ್ಳುತ್ತದೆ. ಪ್ರತಿ ವರ್ಷವೂ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತಾದಿಗಳ ಸಂಖ್ಯೆ ೧ ಲಕ್ಷಕ್ಕಿಂತ ಹೆಚ್ಚಾಗುತ್ತಿದೆ.

ಹೆಚ್ಚಿನ ಮಾಹಿತಿ
service-image

ಪ್ರೇಕ್ಷಣೀಯ ಸ್ಠಳಗಳು

ಕುಡಲ ಸಂಗಮವು ಕರ್ನಾಟಕದ ಬಾಗಲಕೋಟ್ ಜಿಲ್ಲೆಯಲ್ಲಿ ಇದ್ದು, ಹಲವಾರು ಐತಿಹಾಸಿಕ ಹಾಗೂ ಭೌಗೋಳಿಕ ವಿಶಿಷ್ಟತೆಗಳಿಂದ ಕೂಡಿರುವ ಪ್ರೆಕ್ಶಣಿಯ ಸ್ಥಳಗಳಿಂದ ಸುತ್ತುವರಿಯಲ್ಪಟ್ಟಿದೆ.

ಕೂಡಲ ಸಂಗಮಕ್ಕೆ ಬರುವಭಕ್ತಾದಿಗಳು ಹಾಗೂ ಪ್ರವಾಸಿಗರು, ಇಲ್ಲಿಗೆ ಸಮೀಪದಲ್ಲಿರುವ ಸ್ಠಳಾದ, ಬಸವನ ಬಾಗೇವಾಡಿ, ಆಲಮಟ್ಟಿ, ಬಾದಾಮಿ, ಪಟ್ಟದಕಲ್ಲು, ಐಹೊಳೆ, ಬಾಗಲ್‌ಕೋಟ್, ವಿಜಯಪುರ ಕ್ಕೆ ಭೇಟಿ ನೀಡುತ್ತಾರೆ.

ಹೆಚ್ಚಿನ ಮಾಹಿತಿ